ಬರವಣಿಗೆ
- vibeebekal
- May 6, 2020
- 1 min read
ಬರವಣಿಗೆ, ಕಲೆ, ಸಂಗೀತ, ಅಡುಗೆ ಹೀಗೆ ನಾನಾ ವಿಧದ ಆಸಕ್ತಿಗೆ ಜನರು ಹೊಸ ಬಣ್ಣವನ್ನು ನೀಡಿದ್ದಾರೆ. ಅನಿಸಬಹುದು, ಯಾಕೆ ಜನರು ಇದನ್ನು ಎಲ್ಲರ ಮುಂದೆ ಪ್ರಕಟಿಸಲು ತಾ ಮುಂದೆ ನಾ ಮುಂದೆ ಇರುವರು ಎಂದು. ಕಾರಣ ಭಾವನೆಗಳನ್ನು ವ್ಯಕ್ತ ಪಡಿಸಲು ಮನಸು ಅದೆಷ್ಟೋ ಹಾತೊರೆಯುತ್ತಿತೋ?? ಹಂಚಿಕೊಳ್ಳಲು ಮೂಕ ಪ್ರಪಂಚ ಎದುರಿರುವಾಗ, ಎಲ್ಲವೂ ಸತ್ತಂತಾಗಿತ್ತು. ಬಿಡುವಿಲ್ಲದ ದಿನಚರಿ, ಯಾಂತ್ರಿಕ ಬದುಕು, ಕುಗ್ಗುತ್ತಿರುವ ಜೀವನಾಸಕ್ತಿ, ನಮ್ಮಲ್ಲಿರುವ ಈ ಸುಪ್ತ ಅಭಿವ್ಯಕ್ತತೆಗೆ ಪ್ರಾಶಸ್ತ್ಯ ನೀಡದಿರುವುದು ಮುಖ್ಯ ಕಾರಣ. ಬರಿ ವೃತ್ತಿ ಬದುಕು ಮಾತ್ರವಲ್ಲ, ಅದರಿಂದ ಭಿನ್ನ ಹೊರ ಪ್ರಪಂಚವಿದೆ. ದಿನನಿತ್ಯದ ಒತ್ತಡ, ಜೀವನ ಶೈಲಿ ನಮ್ಮ ಅದೆಷ್ಟೋ ಹವ್ಯಾಸಗಳನ್ನು ಮೂಲೆಗುಂಪು ಮಾಡಿದೆ. ಉತ್ತಮ ಹವ್ಯಾಸಗಳು ನಮ್ಮ ದಿನನಿತ್ಯದ ಜೀವನಶೈಲಿಯ ಒಂದು ಭಾಗವೇ ಆಗಿತ್ತು.ಶಾಲಾ ದಿನಗಳಲ್ಲಿರುವಾಗ ಹವ್ಯಾಸಗಳಲ್ಲಿ ತೊಡಗಿಕೊಳ್ಳಲು ನಮಗೆ ಸಾಕಷ್ಟು ಆಸಕ್ತಿ ಇರುತ್ತದೆ ಮತ್ತು ಅವಕಾಶಗಳೂ ಇರುತ್ತವೆ. ಆದರೆ ದೊಡ್ಡವರಾದಂತೆಲ್ಲ ಅನೇಕ ಒತ್ತಡಗಳಿಂದ, ವಿವಿಧ ಕಾರಣಗಳಿಂದ ಮತ್ತು ಸಮಯ ಅಭಾವದ ನೆಪದಿಂದ ಹವ್ಯಾಸಗಳ ಕಡೆ ಬಹುತೇಕರ ಗಮನ ಕಡಿಮೆಯಾಗುತ್ತದೆ. ನಮ್ಮೀ ಬೇಸಗೆ ರಜೆ ...ಕೊರೊನಾ ರಜೆಯಂತೂ ನನಗೆ ಬಹಳ ಹುಮ್ಮಸ್ಸನ್ನು ನೀಡಿದೆ. ಮನಸಿನ ಮೂಲೆಯಲ್ಲಿ ಬಹಳಷ್ಟು ಕನಸುಗಳನ್ನು ಕಂಡವಳು ನಾನು.ಅದಮ್ಯವಾದ ಸಾಹಿತಿಕ ಬರವಣಿಗೆಗಳನ್ನು ತನ್ನಲ್ಲಿ ಬಚ್ಚಿಟ್ಟು, ಬಹಳಷ್ಟು ದಿನದಿಂದ ಈ ಕೃಷಿಗೆ ಒಂದು ಉತ್ತೇಜನವನ್ನು ನೀಡಬೇಕೆಂದಿದ್ದೇನೆ. ದಿನಕ್ಕೊಂದು ಬರಹವನ್ನು ಪ್ರಕಟಿಸಬೇಕೆಂಬ ಹಂಬಲವನ್ನು ಹೊಂದಿರುವೆನು. ದೊಡ್ಡ ಬರಹಗಾರ್ತಿ ಏನು ಅಲ್ಲ, ಆದರೆ ಮನದಲ್ಲಿ ಮೂಡಿದ ಸಂಗತಿಗಳನ್ನು ಒಂದು ಕವನ, ಲೇಖನ, ಅಂಕಣದ ಮೂಲಕ ಸಾಹಿತ್ಯವನ್ನು ರಚಿಸಿ ನಿಮ್ಮ ಮುಂದೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ಅಷ್ಟೇ. ಬಹಳಷ್ಟು ಜನರಿಗೆ ನನ್ನ ಬರಹ ತಲುಪಿದೆ ಎಂದಾದರೆ ಬಹಳ ಸಂತೋಷ. ಜನ ಒಬ್ಬರನ್ನು ನೋಡಿ ಕಲಿಯುವುದು ಹೆಚ್ಚು.ಅದು ಪೈಪೋಟಿಗೆ ಆಗಿರಹುದು ಅಥವಾ ಅನುಕರಿಸುತ್ತಿದಿರಬಹುದು, ಆ ಮೂಲಕವಾದರು ಜನರಲ್ಲಿ ಸ್ಪೂರ್ತಿಯನ್ನು ತರೋಣ. ಜನರಿಗೆ ಜ್ಞಾನವೇನೋ ಬಹಳ ಮಾರ್ಗೋಪಾಯದಿಂದ ಸಿಗುತ್ತದೆ, ಆದರೆ ಜೀವನೋಪಾಯಕ್ಕೆ ಉತ್ತಮ ಬರಹಗಳನ್ನು ವೈಚಾರಿಕ ಪ್ರಜ್ಞೆಯಿಂದ ಆಯ್ದುಕೊಳ್ಳುವುದು ನಮ್ಮೆಲರ ಆದ್ಯತೆ ಆಗಿರಲಿ. ನಿಮ್ಮ ಸಹಕಾರ, ಪ್ರೋತ್ಸಾಹ ನನ್ನಲ್ಲಿ ಇನ್ನಷ್ಟು ಬರಹವನ್ನು ರಚಿಸಲು ಉತ್ತೇಜನವನ್ನು ನೀಡಲಿ.
Comments