ಉದ್ಯಾನನಗರಿ
- vibeebekal
- May 6, 2020
- 1 min read
ಇದೀಗ ಹೆಸರಿಗೆ ಸರಿಸಾಟಿ ನಮ್ಮ ಬೆಂದಕ್ಕಾಳೂರು...
ಉದ್ಯಾನನಗರಿ....ಸುತ್ತಲೂ ಹಸಿರು
ಜಸ್ಟ್ ಎಂಜಾಯ್ ಮಾಡಿ, ಹೇಳಿ ಹಾಯ್ ಬೆಂಗಳೂರು,,,
ಇದೀಗ ಬೆಂಗಳೂರು ಬಹಳ ಶಾಂತ ಸ್ತಬ್ಧ
ಎಲ್ಲಿ ಮರೆಯಾಯಿತು ಆ ವಾಹನಗಳ ಶಬ್ಧ
ಕಾರುಬಾರು ಬರೀ ಹಕ್ಕಿಗಳದೆ ,ಅತ್ತಿಂದಿತ್ತ ಓಡಾಟ
ಬಾರು ಕಾರುಗಳು ಇಲ್ಲ, ನಾವು ಮನೆಯ ಗೂಡಿನಲ್ಲಿ ಪರದಾಟ.
ಮದುವೆ ಸಮಾರಂಭಕ್ಕೇ ಸಜ್ಜಾದ ತರ ಬೀದಿ
ಮೇ ಫ್ಲವರ್ ಬಣ್ಣ ಕೆಂಪು,ಬಿಳಿ,ನೀಲಿ,ಹಳದಿ
ಆವರಣದ ತುಂಬಾ ಇದೇ ಹೂಗಳ ಬಣ್ಣ
ರಸ್ತೆಗಳಲ್ಲಿ ಪ್ಲಾಸ್ಟಿಕ್ ಹಾವಳಿಯಿಲ್ಲ ಓ ಅಕ್ಕಾ ಅಣ್ಣ!!
ಮೆಟ್ರೋ,ರೈಲು,ವಿಮಾನಗಳ ಓಡಾಟ ರದ್ದು
ಕಿವಿಕೊಟ್ಟು ಕೇಳಿದರೆ ಭಾರಿ ಮೋಡಗಳ ಚಲಿಸುವ ಸದ್ದು
ಕೈಗಾರಿಕೆ ಉದ್ದಿಮೆ ಜನಜಂಗುಳಿ ಸ್ಥಗಿತ
ನಿಂತಿವೆ ರಸ್ತೆ ಕಾಮಗಾರಿ ಅಗೆತ
ಆಕಾಶವೀಗ ನೋಡಲು ತಿಳಿ ನೀಲಿ
ಹೊಗೆ ಧೂಳು ತ್ಯಾಜ್ಯಗಳಿಗೆ ಬೇಲಿ
ಒಂದು ತಿಂಗಳ ಕಾಲ ಆದೆವು ಮನೆಗೊಳಗೆ ಬಂದಿ
ಮಹಾಮಾರಿ ಕೊರೊನಾದಿಂದ ಕಲಿತರು ಪಾಠ ಮಂದಿ
ಇದೀಗ ಪರವಶಳಾದೆ ಸುಂದರ ಚಿತ್ರಪಟಗಳನ್ನು ನೋಡಿ
ಏನು ಕಮ್ಮಿಯಿಲ್ಲ ಪ್ಯಾರಿಸ್ ರೋಮ್ ಗಳಿಗೆ ಈ ಮೋಡಿ
ಯೋಚಿಸಿದೆ ಒಮ್ಮೆ ಹೊರಗಡೆ ಕಾಲಿತ್ತು, ಸೆಲ್ಫಿ ತೆಗೆಯೋಣವೆಂದು
ಮನಸು ತಿದ್ದಿ ಹೇಳಿತು ತೆಪ್ಪಗೆ ಮನೆಯೊಳಗೆ ಬಿದ್ದಿರು ಎಂದು
ಬೇಡ ಅಂದುಕೊಂಡೆ ಪಜೀತಿ ಈಗ
ಅದರಿಂದ ಜಸ್ಟ್ ಸ್ಟೇ ಅಟ್ ಹೋಮ್ ಈಗ
ಸಾಹಿತ್ಯ ರಚಿಸುವ ಆಸೆ ಹೊರಹೊಮ್ಮಿತು ಈ ಪರಿಗೆ
ಧನ್ಯವಾದಗಳು ಪರಿಸರ ಪ್ರೇಮಿ ಈ ಛಾಯಾಗ್ರಾಹಕರಿಗೆ.
ರಚನೆ: ವಿ ಬೇಕಲ್
Comments