ಸಾವು
- vibeebekal
- May 6, 2020
- 1 min read
ಮನಸು ವಿಪ್ಲವಗೊಂಡಿದೆ ದುಃಖವು ಹರಿಯದೆ ಮಡುಗಟ್ಟಿದೆ ನೋವು ಮನಸನ್ನು ಘಾಸಿಗೊಳಿಸಿದೆ ಉರಿಯುವ ಆಶಾದೀಪವು ನಂದಿದೆ ಶೋಕಸಾಗರದಲ್ಲಿ ಅಲೆಗಳು ಚಿಮ್ಮುತ್ತಿವೆ ಕೈಚಾಚಿ ಸೆಳೆಯಲು ಯಾರೊಬ್ಬರಿಲ್ಲ... ಕಣ್ಣೀರು ಹರಿಯುತ್ತಿದೆ ಈಗ ಬಹಳಷ್ಟು. ಎಲ್ಲೆಂದರಲ್ಲಿ ನಿನ್ನ ವ್ಯಾಪ್ತಿ ಏಕಾದರು ನೀ ನಮ್ಮ ಕಾಡುವೆ ?? ಕಣ್ಣ ಎದುರಲಿ ಜೀವನದ ಮೂಖಚಿತ್ರ ಹೃದಯದಲ್ಲಿ ಭಾವನೆಗಳ ಸ್ತಬ್ಧ itಚಿತ್ರ ಬಂಧನಗಳನು ಕಳಚಿ ಹೊಸಬಟ್ಟೆ ಧರಿಸಲು ಸಮ್ಮತಿ ಇಲ್ಲ ಯಮ ಕಾವಲು ನಿಂತಿಹನು ಇಂದಿಲ್ಲ ನಾಳೆ ಎನಲು ಧೂತರು ಒಲ್ಲರು. ತಪ್ಪಿಸಿಕೊಳಲು ಎಲ್ಲಿ ಬಚ್ಚಿಡಲಿ ? -------- ಅದು ಆಸಾನೇನಲ್ಲ.. ಏಕೆಂದರೆ ನಾ ಬರುವುದು ಏಕಾಂಗಿ ತೆರಳುವುದು ವಿಧಿ ಲಿಖಿತ... ಬಲ್ಲೆ... ಸಾವಿಲ್ಲದ ಮನೆಯ ಸಾಸಿವೆಯ ನೆನಪಾಯಿತು... ಜೀವನದ ಒಂಟಿ ಪಯಣದ ನೇಕಾರ ನೀ ಇರುವಷ್ಟು ದಿನವೇ ನಮ್ಮೀ ಆಟ. ನಾ ಕಾಲನ ಕೈಯಲ್ಲಿ ಆಡುವ ಕೈಗೊಂಬೆ. ನನ್ನದೆನ್ನುವುದು ಈ ಲೋಕದಲ್ಲಿ ಏನು ಇಲ್ಲ.. ಗಳಿಸದ ಪಾಪ ಪುಣ್ಯದ ಬುತ್ತಿಯ ಜೊತೆಗೆ. ಇನ್ನು,ಬಂದು ಹೋಗು; ಉಂಡು ಹೋಗು ಅಷ್ಟೇ.. ಬದುಕು ಶೂನ್ಯ ನಿನ್ನ ಎದುರಲ್ಲಿ..ನಿರರ್ಥಕ. ಸಾವು...ನೀ ಎನ್ನ ಪಿಡಿದಿರಲು ಮತ್ತೆ ಬದುಕಲು ಹಾತೊರೆಯುತಲಿರುವೆ...... ರಚನೆ : ವಿ ಬೇಕಲ್ ಚಿತ್ರಕೃಪೆ: ವಾಸುಕಿ ಭಾರದ್ವಾಜ್
Comments