ಶ್ರಮದ ಬೆಲೆ
- vibeebekal
- May 6, 2020
- 1 min read
ದೇಶದ ಗಡಿಯನು ಕಾಯುವವನು ಯೋಧ. ದೇಶಕ್ಕೆ ಅನ್ನವನ್ನು ನೀಡುವನು ರೈತನೊಬ್ಬ ಯೋಧ!! ಮಳೆಯೋ ಬಿಸಿಲೊ ಏನನ್ನು ಲೆಕ್ಕಿಸದೆ ದುಡಿಯುವರು ಈ ಶ್ರಮ ಜೀವಿಗಳು ದೇಶದ ಮಂದಿಯನು ತಣ್ಣಗಿರಿಸಲು.. ಬೆವರ ಹನಿ ತೊಟ್ಟಿಕ್ಕುತಿದೆ ಆದರೆ ಮಳೆಹನಿಯ ಪತ್ತೆ ಇಲ್ಲ. ಸಾಲದ ನರಕಯಾತನೆ ಬೇರೆ. ಕಣ್ಣೆತ್ತಿ ನೋಡಿ ಧೈರ್ಯ ತುಂಬುವವರಿಲ್ಲ. ಬೆಳೆ ಬೆಳೆದು ಮಾರುಕಟ್ಟೆಗೆ ಒಯ್ಯಲು ಬೆಂಬಲ ಬೆಲೆ ಕುಸಿದು ಹೀನಾಯ ಸೋಲು ಚೆಲ್ಲುವರು ಬೆಳೆಯನ್ನ ,ರಸ್ತೆಗೆ ,ಎಲ್ಲೆಂದರಲಿ ಆರ್ಥಿಕ ಕುಸಿತ ಆವರಿಸಿತು ಮತ್ತೆ ದೇಶದಲಿ ದೇಶದ ಬೆನ್ನೆಲುಬು.ಅವನಿಲ್ಲದೆ ಯಾರೊಬ್ಬರಿಗೂ ಅನ್ನವಿಲ್ಲ ಅವನ ದುಡಿಮೆಯೇ ನಮಗೆ ಸಹಕಾರ.ಅವನಿಲ್ಲದೆ ವಿಧಿಯಿಲ್ಲ. ಶ್ರಮದ ಬೆಲೆ ಯಾವಾಗ ತಿಳಿಯಿತೋ.. ಜನ ತೇಗಿ ಅನ್ನ, ಉಂಡೆದ್ದರಾಗ. ಮನೆ ಮನೆಯಲಿ ರೈತನ ಕಷ್ಟವನ್ನು ನೆನೆದಾಗ. ರಚನೆ: ವಿಬೇಕಲ್
Comentários