ಅಕ್ಷಯವಾಗಿರಲಿ
- vibeebekal
- May 6, 2020
- 1 min read
ಬಂಗಾರದ ಖಜಾನೆ ತುಂಬಿತೋ ಕಾಂಚಾಣ ಕುರುಡು ಮಾಡಿತೋ ಆದರೆ ಮನವೆಂಬ ಪಾತ್ರೆಯಲ್ಲಿ ಇನ್ನೂ ಬೇಕೆನ್ನುವ ವಾಂಛೆ ಮಾತ್ರ ಎಂದೂ ಬರಿದಾಗಿಲ್ಲ ಯಾಕೆಂದರೆ ಇದು ಅಕ್ಷಯವಿದು.... ಉತ್ತಮ ಆಲೋಚನೆಯು ಅಕ್ಷಯವಾಗಿರಲಿ
ಮನದಲ್ಲಿ ಅಡಗಿದ ರಾಕ್ಷಸರ ಸಂಹರಿಸಲು... ಅಕ್ಷಯವು ಸಿರಿ ಸಂಪತ್ತೆಂಬ ಪ್ರೀತಿಯಾಗಲಿ ಅದ ಹಂಚಿ ಜನರು ಸಮನ್ವತೆಯಲಿರಲಿ ಸಹಕಾರ , ಸಹಬಾಳ್ವೆ, ಪ್ರೀತಿ ಬಾಂಧವ್ಯಗಳ ಜೊತೆ ಮಾನವತೆಯ ಸವಿ ಪಸರಿಸಿ ಅರಿಷಡ್ವರ್ಗವೆಂಬ ವೈರಿಗಳ ಕ್ಷಯವಾಗಲಿ ಅದೇ ಕೂಡಲಸಂಗಯ್ಯನನ್ನು ಒಲಿಸುವ ಪರಿ! ಅಕ್ಷಯದ ಪಾತ್ರೆಯನ್ನು ಜನಮನದಿ ನೀ ತುಂಬು ಕೇಶವ ...ಇಂದು ನೀ ಮುದದಿ. ಆಗ ದೇಶವು ಸುಬೀಕ್ಷೆಯ ಅಕ್ಷಯಪಾತ್ರೆ. ರಚನೆ: ವಿ ಬೇಕಲ್
Comments