ನೆನಪುಗಳ ಪೂರ.
- vibeebekal
- May 5, 2020
- 1 min read
ಬರಿದಾದ ಮನದಲ್ಲಿ ಮರುಕಳಿಸಿದೇ ನೀ..... ಏಲ್ಲೋ ಅಡಗಿದ ಆ ನನ್ನ ನೆನಪುಗಳ ಪೂರ. ಸದ್ದು ಮಾಡದೇ ಬಾನಿಂದ ಬಂದ ಗೊಲ್ಲನ ಪರಿ; ಕಣ್ಣು ಮಿಟುಕಿಸಿ ಒಮ್ಮೆ ಬಾಗಿಲಿನಿಂದ ನೀ...... ಕದವ ತೆರೆದೆನು ನಾ ಹಂಚಿಕೊಳಲು ಮನದಾಳದ ಮಾತುಗಳನ್ನ. ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪ... ನೋಡ ವಶಳಾದೆ ನಿನ್ನ ಕುಡಿನೋಟದ ಬಾಣ. ಸಾವಿನ ಅಲಗುಗಳಾಗಿ ತಿವಿಯಹತ್ತಿತು ಆ ನಿನ್ನ ಸ್ವರೂಪ..... ಮಾಸಿ ಹೋಗದೇ ಮರೆಮಾಸಿ ಹೋಗದೇ ಈ ಹರಣ? ವಾಸ್ತವ ಜಗತ್ ಭಾವದ ವಿಸ್ಮೃತಿಯಲಿ ತಲ್ಲೀನವಾಗಿಹುದಿಲ್ಲಿ ನನ್ನ ಮನ.
Comments