ಪ್ರೀತಿ
- vibeebekal
- May 5, 2020
- 1 min read
ನನ್ನ ಹೃದಯದಲ್ಲಿ ಪ್ರೀತಿಗೆ ನನ್ನದೇ ಆದ ಕೊಟೇಶನ್ನು, ಡೆಫಿನಿಶನ್ನು ನೀಡಿದ್ದೆ .ಆ ಪ್ರೀತಿಯ ವ್ಯಾಖ್ಯೆ ಏನು ಎಂಬುವುದನ್ನು ನಿಮ್ಮ ಮುಂದಿಡೋ ಈ ಸಣ್ಣ ಪ್ರಯತ್ನ........ ಆ ಮಾವಿನಮರ......ಆ ಕೋಗಿಲೆ ವಸಂತಕಾಲದಲ್ಲಿ ಆ ಮಾವಿನಮರ ತನ್ನ ಆಶ್ರಯದಲ್ಲಿ ಕೋಗಿಲೆಗೆ ನೆಲೆ ನೀಡಿ, ತನ್ನ ಮರದ ಚಿಗುರುಗಳ್ಳನ್ನು ಉಣಬಡಿಸಿ..ಎಲ್ಲೇ ಹಾರಿ ಹೋದರೂ ಕೋಗಿಲೆ ಮತ್ತೆ ಬಂದಿತೆಂಬ ಭಾವದಿಂದ ಪ್ರತೀ ವಸಂತದಲ್ಲೂ ಚಿಗುರಿ ಎದುರು ನೋಡುತ್ತದೆಯಲ್ಲ ಆದು ಪ್ರೀತಿ. ಆ ಕರಿಮುಗಿಲು ............ಆ ಮಳೆಹನಿ ತನ್ನ ಜೊತೆಯಾಗಿದ್ದ ಮಳೆಹನಿಯನ್ನು ಒಡಲ್ಲಲ್ಲಿ ಬಚ್ಚಿಟ್ಟು, ಭುವಿಯ ಅಮೃತ ಸಿಂಚನಗಯ್ಯಲು,ವಿಧಿಯೆ ಇಲ್ಲದೆ ಕೊನೆಗೆ ಏನನ್ನು ಲೆಕ್ಕಿಸದೆ ಗಗನದೆತ್ತರದಿಂದ ಹರಿಯ ಬಿಡುತದೆಯಲ್ಲಾ ಆ ಕರಿಮುಗಿಲ್ ...ಅದು ಪ್ರೀತಿ. ಆ ಪುಟ್ಟ ಮಗು.......ಆ ಗುಬ್ಬಿ ಮರಿ ಮದುವೆ ಮನೆಯಲ್ಲಿ ಕೊಟ್ಟ ಸಿಹಿತಿಂಡಿಯನು, ಆ ಪುಟ್ಟ ಮುಷ್ಟಿಯಲ್ಲಿ ಬಚ್ಚಿ ಮನೆಗೆ ತಂದು..ಮನೆಯೆದುರಿಗಿನ ಹೂತೋಟದಲ್ಲಿರುವ ಆ ಗುಬ್ಬಿ ಮರಿಗೆ ತಿನಿಸಿ ಕೇಕೆ ಹಾಕುತ್ತ ಆನಂದಿಸುತದೆಯಲ್ಲ ಆ ಆ ಪುಟ್ಟ ಮಗು ಅದು ಪ್ರೀತಿ. ಆ ಸೂರ್ಯ........ಆ ಸೂರ್ಯಕಾಂತಿ ಪ್ರತಿದಿನ ಆ ಸೂರ್ಯನ ಬರುವಿಗಾಗಿ ಕಾದು,ಅವನನಲ್ಲದೆ ಮತ್ಯಾರನು ನೋಡದಿರಲೋಸುಗವಾಗಿ ತಲೆತಗ್ಗಿಸಿ ನಿಂತು, ಸಂಜೆ ಕಳೆಯುತ್ತ ಮುಖಮುಚ್ಚಿ ಬಾಡಿ ಹೋಗುವಳೋ ಅದು ಪ್ರೀತಿ. ಆ ದುಂಬಿ......ಆ ಮಲ್ಲಿಗೆ ಮುಂಜಾನೆ ಬರುವ ದುಂಬಿಗಾಗಿ ಮಲ್ಲಿಗೆಯು ನಸುನಾಚಿಕೆಯಿಂದ ಅರಳಿ, ಮಕರಂದ ನೀಡಿ ಅದೇ ನೆನಪಲ್ಲಿ ದಿನಪೂರ್ತಿನಿಂದು ಸಂಜೆಯಾಗುತ್ತಲೇ ಬಾಡಿ ಪರಿಶುದ್ದ ಸತಿಯಾಗಿ ತನ್ನ ಪ್ರಾಣ ಬಿಡುತ್ತದೆಯಲ್ಲ ಅದು ಪ್ರೀತಿ. ಆ ಕೃಷ್ಣ......ಆ ರಾಧೆ ತನ್ನ ಗೋಪಾಲ ಸಮೂಹದಲ್ಲಿ ಮಾಯೆಯಾಗಿ ಮೆರೆದು,ತನ್ನ ಅಸ್ಥಿತವನ್ನು ಜಗಜ್ಜಾಹಿರಾತುಗೊಳಿಸದೆ,,ತನ್ನ ಇರುವನ್ನು ಆ ರಾಧೆಗಾಗಿ ನೀಡಿ, ವಿಶ್ವ ಮಧುರ ಪ್ರಣಯ ಕಾವ್ಯಕ್ಕೆ ಮುನ್ನುಡಿ ಬರೆದು..ಇಡೀ ಭೂಲೋಕದಲ್ಲಿ ಇಲ್ಲದ ಅಪವಾದಗಳಿಗೆ ಗುರಿಯಾಗಿ ಅಪ್ರತಿಮನಾಗಿ ಮೆರೆದು ಲೋಕ ಸಂದೇಶವನ್ನು ನೀಡಲಿಲ್ಲವೇ ಅದು ಪ್ರೀತಿ. ಪ್ರೀತಿ ಇಲ್ಲದ ಮೇಲೆ ಹೂವು ಅರಳಿದ್ದು ಹೇಗೆ ? ಮೋಡ ಕರಗಿದ್ದು ಹೇಗೆ ? ಮಗು ನಕ್ಕೀತು ಹೇಗೆ ??? ಜೀವನದಲ್ಲಿ ಈ ಪ್ರೀತಿಯ ಸೆಲೆ ಇಲ್ಲವಾಗಿದ್ದರೆ ಬರಡು ಭುಮಿಯಾಗಿರುತಿತ್ತು ಬಾಳು. ಪ್ರೀತಿ ಎಂಬುವುದು ಮಧುರ ಹಾಗು ಅಮರ. ಕಾರಣದಿಂದ ಬರುವ ಪ್ರೀತಿ " ಆ ಕಾರಣ" ಎನ್ನುವುದು ಇಲ್ಲವಾದ ಮೇಲೆ ನಮ್ಮನು ತೊರೆದು ಬಿಡಬಹುದು. ಕಾರಣದ ಪ್ರೀತಿಯ ಹುಡುಕದಿರಿ, ನಿಷ್ಕಲ್ಮಷವಾದ ಪ್ರೀತಿಯನ್ನು ಹುಡುಕುವಂತವರಾಗಿ.........
Comments