ಮರೀಚಿಕೆ
- vibeebekal
- May 6, 2020
- 1 min read
ಮಾಡುವ ಕರ್ಮವು ಮಾಡದಂತೆ ಇರಲಿ ನೀಡುವ ಕೈ ನೀಡಿಲ್ಲದಂತೆ ಇರಲಿ ಹೊಗಳುವ ನಾಲಗೆ ಅಲ್ಲಾಡದಿರಲಿ ಜಂಬದಿ ಹಿಗ್ಗುವ ಮತಿಯ ಜಿಗಿಯ ಬಿಡದಿರಲಿ. ಭವಬಂಧನಗಳ ಆಚೆ ಇರುವ ತೃಪ್ತಿಯನು ಗಳಿಸು ಆರ್ಜವ ಪರಿಪಕ್ವತೆಯನು ಸಾಧಿಸು. ಪರದ್ರವ್ಯ ವ್ಯಾಮೋಹಗಳ ವರ್ಜಿಸು ಆಸೆ ಎಂಬ ಬಿಸಿಲ್ಗುದುರೆಗೆ ಕಡಿವಾಣ ಹಾಕು ಏರುವ ಮನದ ವ್ಯಾಮೋಹಗಳ ಹತ್ತಿಕ್ಕು ಪಂಚೇಂದ್ರಿಯಗಳ ನಿಯಂತ್ರಿಸು. ಭಜಿಸು ನೀನು ಆ ಲಿಂಗ ರೂಪಿಯ ಪ್ರತಿಫಲಾಪೇಕ್ಷೆ ಇಲ್ಲದೆ ಆ ಸ್ವರೂಪಿಯ. ದಿಟ್ಟ ನಿಲುವು, ನಿನಗೆ ಚೆಲುವು ಮಾಡು ನೀ ದುಡಿಮೆ, ನಿನಗಿರದು ಕಡಿಮೆ. ಕಡೆಗಣಿಸದಿರು ನೀನು ಸೃಜನಶೀಲ ಮಿಡಿತಗಳ ಮೌನವೀಣೆ ನುಡಿವ ಮನದಾಸೆಯ ತುಡಿತಗಳ. ತಿರಸ್ಕರಿಸು ನಿನ್ನ ಹಲಬುವವರನ್ನು ತಿಳಿ ಅವರು ಮೂಡ ಜನರೆಂದು. ಮೀರಿ ನಡೆ, ಛಲದಿಂದ ನಡೆ,ಆದರೆ ತಿಳಿ ಲಿಂಗ ಸಮಾನತೆ ಒಂದು ಮರೀಚಿಕೆ ಎಂದು. ರಚನೆ: ವಿ ಬೇಕಲ್
Yorumlar