ರಾಜ್ಯೋತ್ಸವ
- vibeebekal
- May 5, 2020
- 1 min read
ಚಂಡಮಾರುತ ನೀಲಂನ ಅರ್ಭಟಕೆ ಮರೆಯಾಗಲಿಲ್ಲ ಆ ನಮ್ಮ ಸೂರ್ಯ. ಕನ್ನಡದ ರವಿ ಮೂಡಿ ಬಂದ... ಕನ್ನಡ ನಾಡಿನ ಜೀವನದಿ ಕಾವೇರಿ ಹರಿದಳು ಭೋರ್ಗರೆಯುತ್ತ... ಇದು ಜೇನಿನ ಹೊಳೆಯೋ ಹಾಲಿನ ಮಳೆಯೋ !!!!! ಶ್ರೀಗಂಧದ ನಾಡಿನಲ್ಲಿ ಹಬ್ಬಿತು ಕನ್ನಡದ ಕಂಪು ಊರೆಲ್ಲೆಡೆಗೆ ಇಂದು ರಾಜ್ಯೋತ್ಸವ..ಇಂದು ರಾಜ್ಯೋತ್ಸವ.... ಸುಮಧುರ ಹಾಡುಗಳ ಸುಪ್ರಬಾತವು ಕೇಳುತಿದೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.. ಹಚ್ಚಿದರು ಕರುನಾಡ ವೀರರು ಆ ಕಲರವದೊಂದಿಗೆ ಹಚ್ಚೇವು ಕನ್ನಡದ ದೀಪ.... ಸಾರಥಿ ಏರಿಸಿದನು ಕನ್ನಡ ಬಾವುಟ ಕೈ ಮುಗಿದು ಏರು ಇದು ಕನ್ನಡದ ತೇರು. ಜಿನುಗುತಿಹ ಮುಂಗಾರಿನ ಮಳೆಗೆ,ಕೇಳಿಸುತಿದೆ ಘೋಷಣೆ ಸಿರಿಗನ್ನಡಂ ಗೆಲ್ಗೆ ..ಸಿರಿಗನ್ನಡಂ ಗೆಲ್ಗೆ .. ಪ್ರಸಾರಿಸುತಿದೆ ಟಿವಿ,ರೇಡಿಯೋ, ಜೈ ಭಾರತ ಜನನಿಯ ತನುಜಾತೆ... ಮೈನವಿರೇಳುತಿದೆ ಕೇಳಿ ಆ ಹೆಮ್ಮೆಯ ಹಾಡುಗಳ, ತಿಳಿಯಿತು ಆ ಕ್ಷಣ ಕನ್ನಡವೆಂದರೆ ಬರಿ ನುಡಿಯಲ್ಲ... ಹಿರಿದಿದೆ ಅದರರ್ಥ. ದ್ವನಿ ಸೇರಿಸಿದೆ ನಾ ... ಹಂಸಲೇಖ, ಉದಯಶಂಕರ್, ರಾಜ್ ಕುಮಾರ್ ಗೀತೆಗಳಿಗೆ ಜನುಮ ಸಾರ್ಥಕತೆಯ ಕಡೆಗೆ ಯೋಚಿಸಿದೆ ನಾ.... ಕನ್ನಡ ನಾಡಿನ ಮಕ್ಕಳು ನಾವು,ನಾವಾಡುವ ನುಡಿಯೇ ಕನ್ನಡ ನುಡಿ. ನಮ್ಮ ನಾಡು ಕನ್ನಡ..ಹೆಮ್ಮೆಯ ನಾಡು ಸುಸಂಸ್ಕ್ರತಿಯ ಬೀಡು. ಕರುನಾಡ ತಾಯಿ ಸದಾ ಚಿನ್ಮಯಿ. ಇದೆ ನಾಡು ಇದೆ ಭಾಷೆ....ಎಂದೆಂದೂ ನಮ್ಮದಾಗಿರಲಿ. ಮರಳಿ ಬಂತು ವಾಂಛೆ,ಮರುಜನ್ಮ ಬೇಡೆಂದು ಇದ್ದ ನನ್ನಲ್ಲಿ ಹುಟ್ಟಿದರೇ ಕನ್ನಡ ನಾಡಲ್ಲೇ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಹರಸು ತಾಯೆ....ನಮ್ಮ ಜನ್ಮ ಧಾತೆಯೆ. ಬಾರಿಸು ಕನ್ನಡ ಡಿಂಡಿಮವ..ಓ ಕರ್ನಾಟಕ ಹೃದಯ ಶಿವಾ..... ಕುರುಡು ಕಾಂಚಣದ ಬೆನ್ನೇರಿ ವಲಸಿಗರಾದ ಓ ನಮ್ಮ ಕನ್ನಡ ದೇಶ ಬಾಂಧವರೇ... ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡೆ? ಮರೆಯದಿರಿ ಎಂದೆಂದಿಗೂ ಕನ್ನಡ ಪ್ರೇಮವ, ಎಲ್ಲಾದರೂ ಇರು ಎಂತಾದರು ಇರು ಸಾರಿರಿ ಕನ್ನಡ ಮಣ್ಣಿನ ಹಿರಿಮೆಯ.. ಕೂಗಿರಿ ಒಕ್ಕೊರಲಲ್ಲಿ "ಜೈ ಭುವನೇಶ್ವರಿ" ಎಂದು ಆಗಲಿ ನಿಮ್ಮ ಚೇತನ...ಅನಿಕೇತನವೆಂದೆಂದು.....
Comments